
ಮಜುಂದಾರ್ ಅವರು ಕಳೆದ ವರ್ಷದ ಸೆಪ್ಟೆಂಬರ್ 4 ರಿಂದಲೇ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಧಿಕ ರಕ್ತದೊತ್ತಡ, ಥೈರಾಯ್ಡ್ ಮತ್ತು ಯಕೃತ್ತಿನ ದೀರ್ಘಕಾಲದ ಕಾಯಿಲೆ (Chronic Liver Disease) ಹಿನ್ನೆಲೆಯಲ್ಲಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀರ್ಘಕಾಲದ ಐಸಿಯು ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದ ಅವರನ್ನು ನವೆಂಬರ್ 10 ರಂದು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಜನವರಿ 23 ರಂದು ಮತ್ತೆ ತೀವ್ರ ಜ್ವರ ಮತ್ತು ಸೋಂಕು ಕಾಣಿಸಿಕೊಂಡಿದ್ದರಿಂದ ಅವರ ಸ್ಥಿತಿ ಹದಗೆಟ್ಟಿತ್ತು. ವೈದ್ಯಕೀಯ ಬುಲೆಟಿನ್ ಪ್ರಕಾರ, ಅವರು ‘ಸೆಪ್ಟಿಕ್ ಶಾಕ್’ಗೆ ಒಳಗಾಗಿದ್ದರು ಮತ್ತು ಇಂದು ಬೆಳಿಗ್ಗೆ 7:43 ಕ್ಕೆ ಹೃದಯಾಘಾತ ಸಂಭವಿಸಿದೆ. ವೈದ್ಯರು ಸಿಪಿಆರ್ ಮೂಲಕ ಉಳಿಸಲು ಪ್ರಯತ್ನಿಸಿದರೂ, ಬೆಳಿಗ್ಗೆ 9:02 ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಮೂರು ದಶಕಗಳ ಅದ್ಭುತ ಪಯಣ
1991 ರಲ್ಲಿ ಸಂಬಲ್ಪುರಿ ಸಂಗೀತದ ಮೂಲಕ ವೃತ್ತಿಜೀವನ ಆರಂಭಿಸಿದ ಅಭಿಜಿತ್, ನಂತರ ಒಡಿಶಾ ಚಿತ್ರರಂಗದ ಅನಿವಾರ್ಯ ಅಂಗವಾಗಿ ಬೆಳೆದರು. ಸುಮಾರು 700 ಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ನೀಡಿರುವ ಇವರು, ‘ಸಿಸ್ಟರ್ ಶ್ರೀದೇವಿ’, ‘ಲವ್ ಸ್ಟೋರಿ’, ‘ಮಿಸ್ಟರ್ ಮಜ್ನು’ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಜೀವ ತುಂಬಿದ್ದರು. ಇವರ ಅಕಾಲಿಕ ನಿಧನಕ್ಕೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮಾಜಿ ಸಿಎಂ ನವೀನ್ ಪಟ್ನಾಯಕ್ ತೀವ್ರ ಕಂಬನಿ ಮಿಡಿದಿದ್ದಾರೆ.













