ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಬಳ್ಳಾರಿ ಕೌಲ್‌ಬಝಾರ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಕರ್ನಾಟಕದ ಹೆಮ್ಮೆ ‘ಮೈಸೂರು ಸ್ಯಾಂಡಲ್’ ಬ್ರಾಂಡ್ ಈಗ ಹೊಸ ಘಮದಲ್ಲಿ ಮಾರುಕಟ್ಟೆಗೆ. ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (KSDL) ಹೊಸ ಮಲ್ಲಿಗೆ, ಲ್ಯಾವೆಂಡರ್, ಗುಲಾಬಿ, ಲೋಳೆಸರ ಸುವಾಸನೆಯುಳ್ಳ ಸೋಪುಗಳನ್ನು ಬಿಡುಗಡೆ ಮಾಡಿದೆ.
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಭಕ್ತರಿಗೆ ನೀಡುವ ಉಚಿತ ಅನ್ನ ಪ್ರಸಾದದಲ್ಲಿ ಹೊಸ ಐಟಂ ಸೇರಿದೆ. ಗುರುವಾರದಿಂದ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದಂ ಭವನದಲ್ಲಿ ಮಸಾಲಾ ವಡಾ ಸಹ ಭಕ್ತರಿಗೆ ಪೂರೈಸಲಾಗುತ್ತಿದೆ.