ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ವಿ aಸುನಿಲ್ ಕುಮಾರ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಉದ್ಘಾಟನಾ ಭಾಷಣದಲ್ಲಿ ಶಾಸಕರು ವಿದ್ಯಾರ್ಥಿಗಳಿಗೆ ಕೆಲವು ಕಿವಿ ಮಾತುಗಳನ್ನು ಹೇಳಿದರು.
ಟ್ರಸ್ಟ್ ನ ಸದಸ್ಯರು, ಶಾಲಾಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕರು, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್, ಸಮಿತಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೆ ಸಂಘದ ಅಧ್ಯಕ್ಷ ಸತೀಶ್ ಬಿ. ಶೆಟ್ಟಿಗಾರ್ ಸ್ವಾಗತಿಸಿ ವಂದಿಸಿದರು. ಶಾಲಾ ಉಸ್ತುವಾರಿ ನರಸಿಂಹ ನಾಯಕ್ ನಿರೂಪಿಸಿದರು.
ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಎಲ್ಲಾ ವಿಪ್ರ ಬಾಂಧವರು ಮತ್ತು ವಿಪ್ರ ಮಹಿಳೆಯರು ಸೇರಿ 20 /12/24 ತಾರೀಕು ಶುಕ್ರವಾರ ಸಾಯಂಕಾಲ 5:30 ರಿಂದ 6:30ರ ವರೆಗೆ ಕಲ್ಮಠ ಶ್ರೀ ಸೂರ್ಯನಾರಾಯಣ ಮಠದಲ್ಲಿ ಗಾಯತ್ರಿ ಜಪ ಮತ್ತು ಶ್ರೀ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೆ ಶರಣ್ಯೇ ತ್ರಯಂಬಕೆ ಗೌರಿ ನಾರಾಯಣಿ ನಮಸ್ತುತೆ ಜಪ ನಡೆಯಿತು.