ತೊಂಡೆಕಾಯಿ, ಹೃದಯಾಕಾರದ ಎಲೆಗಳುಳ್ಳ ಒಂದು ಸಣ್ಣದಾದ ಬಳ್ಳಿತರಕಾರಿ. ಇದನ್ನು ಭಾರತೀಯರು ಹಾಗೂ ಏಷ್ಯನ್ ರಾಷ್ಟ್ರಗಳು ದಿವ್ಯ ಔಷಧೀಯ ಉಪಯೋಗಗಳಿಗೆ ಬಳಸುತ್ತಿದ್ದಾರೆ. ಪೌಷ್ಟಿಕಾಂಶ, ಜೀರ್ಣಕ್ರಿಯೆ ಸುಧಾರಣೆ, ಮಧುಮೇಹ ನಿಯಂತ್ರಣ, ಕ್ಯಾನ್ಸರ್ ನಿರೋಧನೆ, ಅಲರ್ಜಿ ನಿವಾರಣೆ ಮತ್ತು ಸೋಂಕುಗಳಿಂದ ರಕ್ಷಣೆ—ಇವೆಲ್ಲವೂ ತೊಂಡೆಕಾಯಿಯ ಮಹತ್ವವನ್ನು ಹೆಚ್ಚಿಸುತ್ತವೆ.
ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.
ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯೊಂದಿಗೆ, ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವೆಂಬುದು ತಜ್ಞರ ಅಭಿಪ್ರಾಯ. ಪೌಷ್ಟಿಕತೆಯಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ವಿವಿಧ ಅಂಗಾಂಗಗಳಿಗೆ ಬಲ ನೀಡುತ್ತಿದ್ದು, ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿ.
ಪ್ರತಿದಿನದ ಅಡುಗೆಗೆ ಅತ್ಯಗತ್ಯವಾದ ಈರುಳ್ಳಿಯು ಆರೋಗ್ಯದ ದೃಷ್ಟಿಯಿಂದ ಕೂಡಾ ಅಪಾರ ಮಹತ್ವ ಹೊಂದಿದೆ. ಇತ್ತೀಚೆಗೆ ನಡೆಸಿದ ಹಲವು ಅಧ್ಯಯನಗಳು ಹಾಗೂ ಆಯುರ್ವೇದ ತಜ್ಞರ ಅಭಿಪ್ರಾಯಗಳ ಪ್ರಕಾರ, ಈರುಳ್ಳಿಯಿಂದ ತಯಾರಿಸಿದ ರಸದ ಸೇವನೆಯು ದೇಹಕ್ಕೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ.