ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಕೆ ಇರ್ವತ್ತೂರು ಇಲ್ಲಿ ನೂತನವಾಗಿ ಆರಂಭಿಸಿರುವ ಎಲ್ ಕೆ ಜಿ ,ಯು ಕೆ ಜಿ ತರಗತಿಗಳ ಉದ್ಘಾಟನೆಯನ್ನು ಇಲ್ಲಿಯ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸಹಕಾರ ಸಂಘದ ಧುರೀಣರಾದ ಶ್ರೀ ಭಾಸ್ಕರ್ ಎಸ್ ಕೋಟ್ಯಾನ್ ರವರು ನೆರವೇರಿಸಿದರು
ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಹತ್ತು ದಿನಗಳಿಂದ ಅಲೆಯುತ್ತಿದ್ದ, ಮಾನಸಿಕ ಅಸ್ವಸ್ಥತೆ ಹೊಂದಿದ ಅನುಮಾನಾಸ್ಪದ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಅವರು ಮಾನವೀಯತೆ ಮೆರೆದು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಿದ್ದರು. ಸಂಬಂಧಿಕರ ಪತ್ತೆಯಾಗದ ಕಾರಣ, ಇದೀಗ ಆ ಮಹಿಳೆಯನ್ನು ನಿಟ್ಟೂರಿನ ಮಹಿಳಾ ನಿಲಯದಲ್ಲಿ ಸೇರ್ಪಡೆ ಮಾಡಲಾಗಿದೆ.
ಮಳೆಗಾಲದ ಯೋಜನೆಯ ಭಾಗವಾಗಿ ಪೆರ್ಡೂರಿನ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗೆಳೆಯರ ಬಳಗ ಪೆರ್ಡೂರು (ರಿ) ಸಂಸ್ಥೆಯ ವತಿಯಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಇಂದು ಭವ್ಯವಾಗಿ ಜರುಗಿತು.