ಪೆರ್ವಾಜೆ ಸುಂದರ್ ಪುರಾಣಿಕ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.
ಕುದಿಗ್ರಾಮ-82ರಲ್ಲಿ ಶ್ರೀ ಮಹಾಲಿಂಗೇಶ್ವರ ಕೊಂಡಾಡಿ ಬಳಗದ ಆಶ್ರಯದಲ್ಲಿ "ಮೂಜನೇರ್ವದ ಬಲೇ ಕೆಸರ್ ಗೊಬ್ಬುಗ" ಕಾರ್ಯಕ್ರಮವನ್ನು ಜೂನ್ 29ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ದಿ| ಶಾರದಾ ಉಮನಾಥ ಶೆಟ್ಟಿ ಅವರ ಬಾಕ್ಯಾರ್‌ನಲ್ಲಿ ಆಯೋಜಿಸಲಾಗಿದೆ.
ಲೋಕಕಲ್ಯಾಣ, ಧರ್ಮದ ಸ್ಥಾಪನೆ ಮತ್ತು ದುಷ್ಟ ಶಕ್ತಿಗಳ ನಿರ್ಮೂಲನೆಯ ಉದ್ದೇಶದೊಂದಿಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಾರಂಭವಾಗಿರುವ ದಶಾವತಾರ ಮಂತ್ರ ಹೋಮದ ಸರಣಿಯಲ್ಲಿ, ಇತ್ತೀಚಿಗೆ ಮತ್ತೊಂದು ಹೋಮ ಕಾರ್ಯಕ್ರಮ ಗುರುವಾರ (ಜೂನ್ 26)ರಂದು ನಡೆಯಿತು.
ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‌ನಲ್ಲಿ ಸಾವಿರದೊಳಗಿನ ರ‍್ಯಾಂಕ್ ಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.
50 ವರ್ಷದ ಹಿಂದೆ ಆಗಿನ ಪ್ರಾಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಜಾರಿಮಾಡಿದರು.ಈ ಕ್ರಮಗಳಿಂದ ಬಡವರಿಗೆ ರೈತರಿಗೆ ಸಣ್ಣ ರೈತರಿಗೆ ಕಾರ್ಮಿಕರಿಗೆ ಮಹಿಳೆಯರಿಗೆ SCST , OBC ಅನುಕೂಲ ಆಯ್ತು ಎಂದು ಭಾವಿಸಬಹುದು.