ರೊ. ಪಿ ಹೆಚ್ ಎಫ್ ಸುರೇಶ್ ನಾಯಕ್ & ಸುಮ ಎಸ್ ನಾಯಕ್ ದಂಪತಿಗಳ ಮಗ ಶ್ರೀ ಸುಹಾಸ್ ನಾಯಕ್ & ಅಂಜಲಿ ಇವರ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ವಿಜೇತ ವಿಶೇಷ ಶಾಲೆಗೆ ಅವಶ್ಯಕವಿರುವ ಅಡುಗೆ ಪಾತ್ರೆಗಳನ್ನು ಹಸ್ತಾಂತರಿಸಲಾಯಿತು. ಹಾಗೂ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ನಗರದ ಮಿತ್ರ ಆಸ್ಪತ್ರೆಯ ಸಮೀಪ ಇಂದು ಬೆಳಗಿನ ಜಾವ ಮಾನಸಿಕ ಅಸ್ವಸ್ಥ ಯುವಕನೋರ್ವ ಸಾರ್ವಜನಿಕರ ಮನೆಗಳಿಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ವಿಶು ಶೆಟ್ಟಿ ಅಂಬಲಪಾಡಿ ಅವರು ಯುವಕನನ್ನು ರಕ್ಷಿಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಳೆಕುದ್ರು ಮಠದ ಹಿರಿಯ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರು (55) ಶುಕ್ರವಾರ, ಜುಲೈ 4 ರಂದು ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.