: ಕಲ್ಯಾಣಪುರದ ಮೀನು ಮಾರುಕಟ್ಟೆ ಬಳಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆಗಾಳಿಗೆ ಅಸಹಾಯಕರಾಗಿ ತೊಂದರೆಯಲ್ಲಿದ್ದ ವೃದ್ಧರೊಬ್ಬರನ್ನು ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಕೊಳಲಗಿರಿಯಲ್ಲಿರುವ 'ಸ್ವರ್ಗ ಆಶ್ರಮ'ಕ್ಕೆ ದಾಖಲಿಸಿದ್ದಾರೆ.
ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ, ಉಡುಪಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ, ಧರ್ಮಸ್ಥಳ ಇವರ ಸಹಯೋಗದೊಂದಿಗೆ ಗುರುಪೂರ್ಣಿಮಾ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿವರ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಭವ್ಯ ಗುರುವಂದನಾ ಕಾರ್ಯಕ್ರಮ ನಡೆಯಿತು.
ಗರುಡ ಗ್ಯಾಂಗ್‌ನ ಪ್ರಮುಖ ಮತ್ತು ಕುಖ್ಯಾತ ಅಪರಾಧಿಯಾದ ಕಾರ್ಕಳದ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ಎಂಬಾತನನ್ನು 'ಗೂಂಡಾ ಕಾಯ್ದೆ' (ಕರ್ನಾಟಕ ಆಂಟಿ-ಸೋಶಿಯಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್) ಅಡಿಯಲ್ಲಿ ಬಂಧಿಸಲು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.