2025-27ರ ಅವಧಿಗಾಗಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ನೂತನ ಕಾರ್ಯಕಾರಿ ಸಮಿತಿಯ ರಚನೆ ಮತ್ತು ಅಧಿಕಾರ ಹಸ್ತಾಂತರ ಪ್ರಕ್ರಿಯೆಯು 2025ರ ಜುಲೈ 20ರಂದು ನಡೆದ ಮಹಾಸಭೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಉಡುಪಿಯ ಅಭಿಮಾನಿಗಳ ವತಿಯಿಂದ ಆಗಸ್ಟ್ 3ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿರುವ "ಬನ್ನಂಜೆ 90 ಉಡುಪಿ ನಮನ" ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾನುವಾರ ಬಿಡುಗಡೆಗೊಳಿಸಿದರು.
ಜನನಿ ಮಿತ್ರ ಮಂಡಳಿ (ರಿ) ವಾಂಟ್ರಾಯಿ ಪದವು, ರೋಟರಿ ಕ್ಲಬ್ ಕಾರ್ಕಳ, ಜೆಸಿಐ ಕಾರ್ಕಳ, ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ಮತ್ತು ರೊಟ್ರಾಕ್ಟ್ ಕ್ಲಬ್ ಕಾರ್ಕಳ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಕಸ್ತೂರ್ಬಾ ಮೆಡಿಕಲ್ ಕಾಲೇಜ್ (KMC) ಮಣಿಪಾಲ ಇವರ ನೇತೃತ್ವದಲ್ಲಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು