ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಆಂಧ್ರಪ್ರದೇಶದ ಬಾಪಟ್ಟ ಜಿಲ್ಲೆಯಲ್ಲಿ ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರಾದ ಪ್ರಶಾಂತ್ ರೆಡ್ಡಿ ಮತ್ತು ಅವರ ತಂದೆ, ಉದ್ಯಮಿ ವೀರಸ್ವಾಮಿ ರೆಡ್ಡಿ ಅವರನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ರಾಜ್ಯಸಭಾ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ತಲಾ ₹1.46 ಲಕ್ಷ ರೂ. ನಂತೆ ಒಟ್ಟು ₹1.46 ಕೋಟಿ ರೂ. ಮಂಜೂರಾಗಿದೆ
ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಹಾಲು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಮತ್ತು ಪೌಷ್ಟಿಕಾಂಶ ಹೆಚ್ಚಿಸಲು, ಬಮೂಲ್ ನೂತನ ನಿರ್ದೇಶಕ ಡಿ.ಕೆ. ಸುರೇಶ್ ಅವರು ಶಾಲಾ ಮಕ್ಕಳಿಗೆ 'ಫ್ಲೇವರ್ಡ್' ನಂದಿನಿ ಹಾಲು ಪೂರೈಸುವ ಮಹತ್ವದ ಪ್ರಸ್ತಾಪವನ್ನು ಶಾಲಾ ಶಿಕ್ಷಣ ಇಲಾಖೆಯ ಮುಂದಿಟ್ಟಿದ್ದಾರೆ.