ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 500 ಕ್ಕೂ ಅಧಿಕ ಹಿಂದು ಶ್ರದ್ಧಾಳುಗಳಿಗೆ ಸಾಮೂಹಿಕ ಕೃಷ್ಣ ಮಂತ್ರೋಪದೇಶ ನೀಡಿ ಅನುಗ್ರಹಿಸಿದರು.
ಶನಿವಾರ ಮಧ್ಯಾಹ್ನ ಕೆಳಗಿನ ತುಂಬೆ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತಪಟ್ಟವರನ್ನು ಪಾವೂರು ನಿವಾಸಿ ನೌಫಲ್ ಎಂದು ಗುರುತಿಸಲಾಗಿದೆ.
ನಟಿ ರಶ್ಮಿಕಾ ಮಂದಣ್ಣ ಮತ್ತೆ ತಮ್ಮ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗೆ 'ಮೇಜೋ ಸ್ಟೋರಿ' ಸಂದರ್ಶನದಲ್ಲಿ "ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ಬಹುಶಃ ನಾನೊಬ್ಬಳೇ" ಎಂದು ರಶ್ಮಿಕಾ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಕಾರಣವಾಗಿದೆ.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ 'ವನಮಹೋತ್ಸವ 2025', 'ಹಸಿರು ಪಥ', ಮತ್ತು 'ಕಲಬುರ್ಗಿ ಹಸಿರು ಹೆಜ್ಜೆ' ಕಾರ್ಯಕ್ರಮಗಳ ಅಂಗವಾಗಿ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು.