ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವೇ ರಣರೋಚಕ ಕಾದಾಟಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಈ ಪಂದ್ಯದ ವೇಳೆ ಕೊಹ್ಲಿ ಆಕ್ರಮಣಕಾರಿ ವರ್ತನೆಯಿಂದ ಗಮನ ಸೆಳೆದಿದ್ದಾರೆ. ಈ ನಡೆಯನ್ನು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸಲಿದೆ ಎಂದು ವರದಿಯಾಗಿದೆ. ಪಂದ್ಯದ 10ನೇ ಓವರ್ ಮುಕ್ತಾಯದ ವೇಳೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ ಸ್ಯಾಮ್ ಕೊನ್ಸ್ಟಾಸ್ ಅವರನ್ನು ಭುಜಕ್ಕೆ ಭುಜ ನೀಡಿ ಕೆಣಕಿದ್ದರು
ಇದೀಗ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ SpaDex ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಡಿ.30ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಂತರೀಕ್ಷದಲ್ಲಿ ಡಾಕಿಂಗ್ ವ್ಯವಸ್ಥೆಯನ್ನು ಪ್ರಯೋಗಕ್ಕೆ ಗುರಿಪಡಿಸುವ ಎರಡು ಬಾಹ್ಯಾಕಾಶ ನೌಕೆಗಳು ನಭಕ್ಕೆ ಚಿಮ್ಮಲಿವೆ.