ಕರ್ನಾಟಕದ ಹೆಮ್ಮೆ ‘ಮೈಸೂರು ಸ್ಯಾಂಡಲ್’ ಬ್ರಾಂಡ್ ಈಗ ಹೊಸ ಘಮದಲ್ಲಿ ಮಾರುಕಟ್ಟೆಗೆ. ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (KSDL) ಹೊಸ ಮಲ್ಲಿಗೆ, ಲ್ಯಾವೆಂಡರ್, ಗುಲಾಬಿ, ಲೋಳೆಸರ ಸುವಾಸನೆಯುಳ್ಳ ಸೋಪುಗಳನ್ನು ಬಿಡುಗಡೆ ಮಾಡಿದೆ.
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಭಕ್ತರಿಗೆ ನೀಡುವ ಉಚಿತ ಅನ್ನ ಪ್ರಸಾದದಲ್ಲಿ ಹೊಸ ಐಟಂ ಸೇರಿದೆ. ಗುರುವಾರದಿಂದ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದಂ ಭವನದಲ್ಲಿ ಮಸಾಲಾ ವಡಾ ಸಹ ಭಕ್ತರಿಗೆ ಪೂರೈಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.