ಒಡಿಶಾದ ಸುಂದರ್‌ಗಢ ಜಿಲ್ಲೆಯ ಕಲ್ಲು ಕೋರೆಯೊಂದರಲ್ಲಿ ಇರಿಸಲಾಗಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಬಳಕೆ ಮಾಡಬಹುದಾದ ಶಂಕೆಯ ನಡುವೆಯೇ, ಶಸ್ತ್ರಸಜ್ಜಿತರಾಗಿ ಬಂದ 25-30 ನಕ್ಸಲ್ ಸದಸ್ಯರು ಮಂಗಳವಾರ ಟ್ರಕ್‌ವೊಂದನ್ನು ಲೂಟಿ ಮಾಡಿದ್ದಾರೆ
‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಲ್ಲಿ ಹೆಮ್ಮೆಯ ಸಾಹಸ ಪುಟ ಬರೆಯಲಾಗಿದೆ. ಪುರುಷ ಯೋಧರ ಜೊತೆಗೇ 7 ಮಹಿಳಾ ಯೋಧರ ತಂಡವು ಪಾಕಿಸ್ತಾನಿ ಶೆಲ್ ದಾಳಿಗೆ ಹೆದರದೆ ಮೂರು ದಿನ-ಮೂರು ರಾತ್ರಿ ಮುಂಚೂಣಿ ಶಿಬಿರಗಳನ್ನು ಯಶಸ್ವಿಯಾಗಿ ರಕ್ಷಿಸುವ ಮೂಲಕ ದೇಶದ ಗೌರವವನ್ನು ಎತ್ತಿ ಹಿಡಿದಿದೆ.
ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ "ಆಪರೇಷನ್ ಸಿಂದೂರ್" ನ ಹೆಸರಿನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಏರ್ ಬೇಸ್‌ಗಳು ಮತ್ತು ಉಗ್ರರ ತಾಣಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಿದ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಉಲ್ಲೇಖಿಸಿದರು.