ತೆಲುಗು ಮಾಧ್ಯಮಗಳಲ್ಲಿ ಕಳೆದ 18 ವರ್ಷಗಳಿಂದ ಟಿವಿ ನಿರೂಪಕಿಯಾಗಿ ಹಾಗೂ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಶ್ವೇಚ್ಚಾ ವೋತಾರ್ಕರ್ (35) ಅವರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಜನಪ್ರಿಯ ಸಂಗೀತ ವೀಡಿಯೊ ‘ಕಾಂಟಾ ಲಗಾ’ ಮೂಲಕ ಖ್ಯಾತರಾದ ನಟಿ ಹಾಗೂ ರೂಪದರ್ಶಿ ಶೆಫಾಲಿ ಜರಿವಾಲಾ ಶುಕ್ರವಾರ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಇತ್ಯರ್ಥವಾಗುವ ಮುನ್ನವೇ ದೆಹಲಿಯ ಜ್ಯೋತಿ ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ನೇಹಾ ಅವರನ್ನು ಅನ್ಯಕೋಮಿನ ತೌಫಿಕ್ ಎಂಬಾತ ಬುರ್ಖಾ ಧರಿಸಿ ಮನೆಗೆ ನುಗ್ಗಿ ಐದನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾನೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಕ್ಕೆ ಸಂಬಂಧಿಸಿದಂತೆ ತಿರುವನಂತಪುರ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ವಿರುದ್ಧ ಪಕ್ಷದ ನಾಯಕರಿಂದ ಅಸಮಾಧಾನದ ಧ್ವನಿ ಹೊರಹೊಮ್ಮಿದೆ.