ದೆಹಲಿಯ ಲಜಪತ್ ನಗರದಲ್ಲಿ ತಾಯಿ ಮತ್ತು ಮಗನನ್ನು ಬರ್ಬರವಾಗಿ ಗಂಟಲು ಸೀಳಿ ಹತ್ಯೆ ಮಾಡಿದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. 42 ವರ್ಷದ ರುಚಿಕಾ ಸೇವಾನಿ ಹಾಗೂ ಆಕೆಯ 10 ವರ್ಷದ ಮಗ ಕ್ರಿಶ್ ಮೃತಪಟ್ಟ ದುರ್ದೈವಿಗಳು. ಇವರನ್ನು ಹತ್ಯೆಗೈದ ವ್ಯಕ್ತಿ ಮನೆ ಕೆಲಸದವನಾಗಿದ್ದ ಮುಖೇಶ್ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿತರಣೆ ಜಾಲವೊಂದನ್ನು ಭೇದಿಸುವಲ್ಲಿ ಭಾರತ ಮುನ್ನಡೆ ಸಾಧಿಸಿದ್ದು, Narcotics Control Bureau (NCB) ನಡೆಸಿದ 'ಆಪರೇಷನ್ ಮೆಡ್ ಮ್ಯಾಕ್ಸ್'ನಲ್ಲಿ ಉಡುಪಿಯೂ ಪ್ರಮುಖ ನಕ್ಷೆಯಲ್ಲಿ ಕಾಣಿಸಿಕೊಂಡಿದೆ.
ಕನ್ನಡ ಮತ್ತು ತುಳು ನಾಟಕ ರಂಗದಲ್ಲಿ ಅಭಿನಯಿಸಿ, ಬಳಿಕ ತುಳು, ಕನ್ನಡ ಚಲನ ಚಿತ್ರಗಳ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಸಮೀಪದ ನಿಂಜೂರಿನ ಪ್ರೀತಮ್ ನಾಯಕ್ ಅವರನ್ನು ಮುಂಬೈಯ ಕಲಾ ಜಗತ್ತು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.