ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.
ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದ ಸುಳ್ಯ ಮೂಲದ ಯುವಕನೋರ್ವ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರಂತ ಘಟನೆ ಮಾರಿಷಸ್ ದೇಶದಲ್ಲಿ ಸಂಭವಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ (ಅ. 13) ಈಜಿಪ್ಟ್‌ನಲ್ಲಿ ನಡೆದ ವಿಶ್ವ ನಾಯಕರ ಶೃಂಗಸಭೆಯಲ್ಲಿ, ಭಾರತವನ್ನು "ಶ್ರೇಷ್ಠ ದೇಶ" ಎಂದು ಹೊಗಳಿದ್ದು, ಅಲ್ಲಿನ ಉನ್ನತ ನಾಯಕನನ್ನು (ಪ್ರಧಾನಿ ನರೇಂದ್ರ ಮೋದಿ) "ನನ್ನ ಉತ್ತಮ ಸ್ನೇಹಿತ" ಎಂದು ಹೆಸರು ಉಲ್ಲೇಖಿಸದೇ ಶ್ಲಾಘಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಜೇಶ್ ಕಿಶೋರ್ ಶೂ ಎಸೆದ ಹೇಯ ಕೃತ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೆಡಿಎಸ್ಎಸ್) ಮತ್ತು ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಘಟಕಗಳು ತೀವ್ರವಾಗಿ ಖಂಡಿಸಿವೆ.