ಕಾಪು ವಿಧಾನಸಭಾ ಕ್ಷೇತ್ರದ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ರೂ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಶಿಲಾನ್ಯಾಸವನ್ನು ಇಂದು ದಿನಾಂಕ 05-02-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮ ದೇವರ ಲೋಕಾರ್ಪಣೆಗಾಗಿ 150ಕ್ಕೂ ಹೆಚ್ಚು ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನೆ ಸೇವೆ ನಡೆಯಿತು. ಈ ಸೇವೆಗೆ ಕ್ಷೇತ್ರದ ಅರ್ಚಕ ಶ್ರೀ ಅನಂತ ಅಡಿಗರವರು ಚಾಲನೆ ನೀಡಿದರು.