ಹಿರಿಯಡಕ ಗ್ರೀನ್ ಪಾರ್ಕ್ ಶಾಲೆಯಲ್ಲಿ ರೋಟರಿ ಪರ್ಕಳ ಇದರ ಪ್ರಾಯೋಜಕತ್ವದಲ್ಲಿ ಇಂಟಲ್ಯಾಕ್ಸ್ ಕ್ಲಬ್ ಪದ ಪ್ರದಾನ ಸಮಾರಂಭವನ್ನು ಪದ ಪ್ರದಾನ ಅಧಿಕಾರಿ ರೊ | PHF ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಕಾಲರ್ ಮತ್ತು ಗ್ಯಾವಲನ್ನು ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಕು| ಅನುಷಾ ಉಪಾಧ್ಯಾಯ ಅವರಿಗೆ ಹಸ್ತಾಂತರಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿಯೇ ಕಲಿಕೆಯೊಂದಿಗೆ ಸೇವಾ ಮನೋಭಾವನೆಯನ್ನು ರೂಢಿಸಿ ಕೊಳ್ಳಬೇಕೆಂದು ಹಿತವಚನ ನೀಡಿದರು.
ಹಿರಿಯಡ್ಕದ ಮಾಣೈಮಠ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಶ್ರೀ ಆಂಜನೇಯ ಭಜನಾ ಮಂಡಳಿ, ಮಾಣೈ ಎಂಬ ನಾಮಾಂಕಿತದೊಂದಿಗೆ ಹೊಸ ಕುಣಿತ ಭಜನಾ ಮಂಡಳಿಯನ್ನು ಶ್ರೀ ಮುಖ್ಯಪ್ರಾಣ ದೇವರ ಪ್ರಧಾನ ಅರ್ಚಕರಾದ ಶ್ರೀ ಮಾಧವ ಉಪಾಧ್ಯಾಯ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.