ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ , ಭಜನಾ ಮಂಡಳಿಗಳ ಒಕ್ಕೂಟ , ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕಾರ್ಕಳ ತಾಲೂಕು ಇವರ ನೇತೃತ್ವದಲ್ಲಿ ದಿನಾಂಕ/27/07/2025 ಆದಿತ್ಯವಾರ ಮಧ್ಯಾಹ್ನ 2.30ಕ್ಕೆ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಬೈಲೂರು ವಲಯದ ಭಜನಾ ಮಂಡಳಿಗಳಿಗೆ ಪರಿಕರ ವಿತರಣಾ ಕಾರ್ಯಕ್ರಮ ನೆರವೇರಿತು.
ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕೆಂದು ಶ್ರೀ ಪುತ್ತಿಗೆ ಮಠ , ಅರ್ಚಕರು ಮತ್ತು ಊರಿನ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ಇಂದು ದಿನಾಂಕ 25.07.2025ರಂದು ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.
ಉಡುಪಿಯ ಅಭಿಮಾನಿಗಳ ವತಿಯಿಂದ ಆಗಸ್ಟ್ 3ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿರುವ "ಬನ್ನಂಜೆ 90 ಉಡುಪಿ ನಮನ" ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾನುವಾರ ಬಿಡುಗಡೆಗೊಳಿಸಿದರು.
ಶಿರೂರು ಮಠದ ಭಾವಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ, ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಗೌರವಪೂರ್ವಕವಾಗಿ ಫಲ ಕಾಣಿಕೆ ಅರ್ಪಿಸಿ ಅವರಿಂದ ಆಶೀರ್ವಾದ ಪಡೆಯಲಾಯಿತು.