ಫೆಬ್ರವರಿ ತಿಂಗಳಲ್ಲಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿವಪಾಡಿ ವೈಭವ ಕಾರ್ಯಕ್ರಮವನ್ನು ಜಾತ್ರೆಯಂತೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಮೇಳವು ಪ್ರಮುಖ ಆಕರ್ಷಣೆಯಾಗಿ ಬೆಳಗಿತು.
ಶ್ರೀ ಬಬ್ಬು ಸ್ವಾಮಿ ದೈವದ ಸಿರಿ ಸಿಂಗಾರದ ನೇಮೋತ್ಸವದ ಅಂಗವಾಗಿ, ಅಟೋ ಚಾಲಕರು ಮತ್ತು ಮಾಲಕರ ಸಂಘ (ರಿ) ಮಣಿಪಾಲದ ವತಿಯಿಂದ ಹಸಿರು ಹೊರೆ ಕಾಣಿಕೆ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಯಿತು