ಉಡುಪಿಯ ಚಿತ್ರಸಿರಿ ಆರ್ಟ್ಸ್ ಸೆಂಟರ್ ಪ್ರಸ್ತುತ ಪಡಿಸುವ ಮಕ್ಕಳ ಚಿತ್ರ ಪ್ರದರ್ಶನ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ ದೈವಜ್ಞ ಕಲಾಮಂದಿರ ಸೌತ್ ಸ್ಕೂಲ್ ಎದುರುಗಡೆ ಒಳಕಾಡು ಇಲ್ಲಿ ಜನವರಿ 25 ಮತ್ತು 26ರಂದು ನಡೆಯಲಿದೆ.
ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮ ದೇವರ ಲೋಕಾರ್ಪಣೆಗಾಗಿ 150ಕ್ಕೂ ಹೆಚ್ಚು ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನೆ ಸೇವೆ ನಡೆಯಿತು. ಈ ಸೇವೆಗೆ ಕ್ಷೇತ್ರದ ಅರ್ಚಕ ಶ್ರೀ ಅನಂತ ಅಡಿಗರವರು ಚಾಲನೆ ನೀಡಿದರು.
53ನೇ ಉಚಿತ ಸಾಮೂಹಿಕ ವಿವಾಹವು 2025ರ ಮೇ 3ರಂದು ಸಂಜೆ 6.48ಕ್ಕೆ ಬೆಳ್ತಂಗಡಿಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗೋಧೂಳಿ ಲಗ್ನದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯಲಿದೆ.