ಲೋಕಕಲ್ಯಾಣಕ್ಕಾಗಿ ಹೆಬ್ರಿ ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿಯ ವಿಪ್ರ ಬಾಂಧವರು ಹೆಬ್ರಿಯ ಅನಂತಪದ್ಮನಾಭ ದೇವಸ್ಥಾನದಿಂದ ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದವರೆಗೆ ಭಕ್ತಿ ಪಾದಯಾತ್ರೆ ನಡೆಸಿದರು.
ಆಂಧ್ರಪ್ರದೇಶದ ನೆಲ್ಲೂರಿನ ಪ್ರತಿಷ್ಠಿತ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಹಾಲಂಡಿನ ಮಹರ್ಷಿ ವೇದಿಕ್ ಯುನಿವರ್ಸಿಟಿ ಇವುಗಳ ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸನಾತನ ರತ್ನ ಬಿರುದನ್ನಿತ್ತು ಸಂಮಾನಿಸಲಾಗಿದೆ.
ಭಾರತೀಯ ಜ್ಞಾನ ಪರಂಪರೆಯ ಅಮೂಲ್ಯ ಕೃತಿಗಳಾದ ಶ್ರೀಮದ್ ಭಗವದ್ಗೀತೆ ಮತ್ತು ಭರತ ಮುನಿಗಳ ನಾಟ್ಯಶಾಸ್ತ್ರಗಳನ್ನು ಯುನೆಸ್ಕೋ (UNESCO) ಸಂಸ್ಥೆ ತನ್ನ Memory of the World Register ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಿದೆ.