ಜನಪ್ರಿಯ ಸಂಗೀತ ವೀಡಿಯೊ ‘ಕಾಂಟಾ ಲಗಾ’ ಮೂಲಕ ಖ್ಯಾತರಾದ ನಟಿ ಹಾಗೂ ರೂಪದರ್ಶಿ ಶೆಫಾಲಿ ಜರಿವಾಲಾ ಶುಕ್ರವಾರ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.
'ಕಾಂತಾರ: ದ ಲೆಜೆಂಡ್ ಪಾರ್ಟ್ 1' ಚಿತ್ರಕ್ಕಾಗಿ ಶೂಟಿಂಗ್ ಸೆಟ್ ಆಗಿ ನಿರ್ಮಿಸಲಾಗಿದ್ದ ಹಡಗಿನ ಆಕೃತಿಯ ವಿನ್ಯಾಸಾತ್ಮಕ ರಚನೆ ಜೂನ್ 14ರ ಸಂಜೆ ಸುರಿದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಸ್ವಲ್ಪ ಮಟ್ಟಿಗೆ ವಾಲಿದ್ದರೂ, ಯಾವುದೇ ಹಾನಿ ಅಥವಾ ಅಪಾಯ ಸಂಭವಿಸಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ.
ಕಮಲ್ ಹಾಸನ್ ಅಭಿನಯದ ವಿವಾದಾತ್ಮಕ "ಥಗ್ ಲೈಫ್" (Thug Life) ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ಎಚ್ಚರಿಸಿ, ಚಿತ್ರದ ಬಿಡುಗಡೆಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿತ್ತು.