ವೀ ಒನ್ ಅಕ್ವ ಸೆಂಟರ್ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಕಾರ್ಕಳ ಇದರ ಹತ್ತಿರ ಇರುವ ಈಜು ಕೊಳದಲ್ಲಿ ಜನವರಿ 12 ಆದಿತ್ಯವಾರದಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಏರ್ಪಡಿಸಿದ್ದು ಬೇರೆ ಬೇರೆ ರೀತಿಯ ಸ್ಪರ್ಧೆಗಳು ಇದ್ದು ಬೆಳಿಗ್ಗೆ 9.00 ಗೆ ಗಣ್ಯರಿಂದ ಉದ್ಘಾಟನೆ ಆಗಲಿದೆ.
ಗೋ ಸೇವಾ ಗತಿವಿಧಿ, ಕರ್ನಾಟಕ ರಾಧಾ ಸುರಭಿ ಗೋಮಂದಿರ ಮತ್ತು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.) ಸಹಯೋಗದಲ್ಲಿ ನಂದಿ ರಥಯಾತ್ರೆ ಹಾಗೂ ಸಭಾ ಕಾರ್ಯಕ್ರಮ ಜನವರಿ 10ರಂದು ಸಂಜೆ 5 ಗಂಟೆಗೆ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ನಡೆಯಲಿದೆ.
ಪ್ರಸಿದ್ಧ ಧಾರ್ಮಿಕ ತೀರ್ಥಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನವನ್ನು ಇನ್ನಷ್ಟು ಸುಲಭಗೊಳಿಸಲಾಗಿದೆ. ಭಕ್ತರ ಆರಾಮದಾಯಕ ದರ್ಶನಕ್ಕಾಗಿ ನಿರ್ಮಿಸಿರುವ ಶ್ರೀ ಸಾನಿಧ್ಯ ಸಂಕೀರ್ಣವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಉದ್ಘಾಟಿಸಲಿದ್ದಾರೆ.
'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.