ರಂಗಭೂಮಿ ಉಡುಪಿ ವತಿಯಿಂದ ನೀಡುವ 2025ರ ’ರಂಗಭೂಮಿ ಪ್ರಶಸ್ತಿಗೆ ಈ ಬಾರಿ ವೈದ್ಯ, ನಾಟಕಕಾರ ಹಾಗೂ ಯಕ್ಷಗಾನ ಮತ್ತು ನಾಟಕ ರಂಗದ ಹಿರಿಯ ಕಲಾವಿದ ಡಾ. ಭಾಸ್ಕರಾನಂದಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂತೆಕಟ್ಟೆ ಅಂಡರ್ ಪಾಸ್ ಮತ್ತು ಕಾಪು ಕ್ಷೇತ್ರದ ಉಚ್ಚಿಲ ಪೇಟೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತಗಳ ಕುರಿತಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಧರಣಿ ನಡೆಸಲು ನಿರ್ಧರಿಸಿದ್ದರು
ಉಡುಪಿಯ ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತ ದಂಪತಿಗಳ ಪುತ್ರರಾದ ಕಲಾವಿದ ಮಹೇಶ್ ಮರ್ಣೆಅವರ ಕಲಾಕೃತಿಯು 3ನೇ ದಾಖಲೆಗೆ ಸೇರ್ಪಡೆಗೊಳ್ಳುವುದರ ಮೂಲಕ ತಮ್ಮ ಕಲಾ ಸಾಧನೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.
ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿಗಳಿಗೆ ನಿರ್ದಿಷ್ಟ ಅವಧಿ ಇರುತ್ತದೆ. ಆದರೆ, ಬಹುತೇಕರಿಗೆ ಆಧಾರ್ ಕಾರ್ಡ್‌ಗೆ ಎಕ್ಸ್‌ಪೈರಿ ದಿನಾಂಕದ ಬಗ್ಗೆ ಗೊಂದಲವಿದೆ.
ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳ ಕುರಿತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ
ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ಧರ್ಮಸ್ಥಳ ಗ್ರಾಮದಲ್ಲಿ ಪತ್ತೆಯಾಗಿರುವ ಶವಗಳ ಕುರಿತ ಪ್ರಕರಣದ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರವು ಇದೀಗ ವಿಶೇಷ ತನಿಖಾ ತಂಡ (S.I.T.) ಒಂದನ್ನು ರಚಿಸಿದೆ.