ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಸುಮಾರು ಎರಡು ಲಕ್ಷ ರೂ. ಬೆಲೆಬಾಳುವ ಫಾರಿನ್ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಸಾವಿಗೀಡಾಗಿರುವ ದುರಂತ ಘಟನೆ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್ ಆವರಣದಲ್ಲಿ ನಡೆದಿದೆ.
ಇಂಫಾಲ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಣಿಪುರದ ಇಂಫಾಲದಲ್ಲಿರುವ ನೂಪಿ ಲಾಲ್ ಸ್ಮಾರಕಕ್ಕೆ ಶುಕ್ರವಾರ ಪುಷ್ಪ ನಮನ ಸಲ್ಲಿಸಿದರು. ಬ್ರಿಟಿಷರ ವಿರುದ್ಧ ಮಹಿಳೆಯರು ನಡೆಸಿದ ಎರಡು ಐತಿಹಾಸಿಕ ಚಳುವಳಿಗಳ ನೆನಪಿಗಾಗಿ ಆಚರಿಸಲಾಗುವ 86ನೇ ನೂಪಿ ಲಾಲ್ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿಯವರು ಈ ಗೌರವ ಸಲ್ಲಿಸಿದರು.
ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ರಸ್ತೆ ಸಾರಿಗೆ ಅಧಿಕಾರಿ (RTO) ವಿಧಿಸಿದ ದುಬಾರಿ ದಂಡದಿಂದ ತೀವ್ರವಾಗಿ ನೊಂದ ಟ್ರಕ್ ಚಾಲಕರೊಬ್ಬರು ತಮ್ಮ ಟ್ರಕ್ ಮೇಲೆಯೇ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಗಡಿಭಾಗದಲ್ಲಿ ನಡೆದಿದೆ.