ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿ ಬಿ ವಿಜಯೋತ್ಸವದಲ್ಲಿ ಅಪಾರ ಅಭಿಮಾನಿಗಳು ಭಾಗವಹಿಸಿದ ಪರಿಣಾಮ ಭೀಕರ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು, 11 ಮಂದಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ದೇಶದಾದ್ಯಂತ ಆಘಾತ ಉಂಟುಮಾಡಿದ್ದು, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಕುರಿತು ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿದಿನದ ಅಡುಗೆಗೆ ಅತ್ಯಗತ್ಯವಾದ ಈರುಳ್ಳಿಯು ಆರೋಗ್ಯದ ದೃಷ್ಟಿಯಿಂದ ಕೂಡಾ ಅಪಾರ ಮಹತ್ವ ಹೊಂದಿದೆ. ಇತ್ತೀಚೆಗೆ ನಡೆಸಿದ ಹಲವು ಅಧ್ಯಯನಗಳು ಹಾಗೂ ಆಯುರ್ವೇದ ತಜ್ಞರ ಅಭಿಪ್ರಾಯಗಳ ಪ್ರಕಾರ, ಈರುಳ್ಳಿಯಿಂದ ತಯಾರಿಸಿದ ರಸದ ಸೇವನೆಯು ದೇಹಕ್ಕೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಕೆ ಇರ್ವತ್ತೂರು ಇಲ್ಲಿ ನೂತನವಾಗಿ ಆರಂಭಿಸಿರುವ ಎಲ್ ಕೆ ಜಿ ,ಯು ಕೆ ಜಿ ತರಗತಿಗಳ ಉದ್ಘಾಟನೆಯನ್ನು ಇಲ್ಲಿಯ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸಹಕಾರ ಸಂಘದ ಧುರೀಣರಾದ ಶ್ರೀ ಭಾಸ್ಕರ್ ಎಸ್ ಕೋಟ್ಯಾನ್ ರವರು ನೆರವೇರಿಸಿದರು