spot_img

ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಕಠಿಣ ಕ್ರಮಕ್ಕೆ ಭಕ್ತರ ಒತ್ತಾಯ; ಗಿರೀಶ್ ಮಟ್ಟೆನ್ನವರ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ ಟಿ. ವಿರುದ್ಧ ಭಕ್ತಾಭಿಮಾನಿಗಳ ಬಳಗದಿಂದ ಉಡುಪಿ ಜಿಲ್ಲಾಧಿಕಾರಿಗೆ ದೂರು

Date:

spot_img

ಉಡುಪಿ : ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ಬಳಗ ಉಡುಪಿಯವರು, ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಗಿರೀಶ್ ಮಟ್ಟೆನ್ನವರ, ಮಹೇಶ ಶೆಟ್ಟಿ ತಿಮರೋಡಿ ಹಾಗೂ ಜಯಂತ ಟಿ. ಇವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಹೆಸರಿಗೆ ಕಳಂಕ ತರುತ್ತಿರುವ ನಿಟ್ಟಿನಲ್ಲಿ ಇವರ ಒಳಸಂಚಿನ ವಿರುದ್ಧ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ಬೃಹತ್ ಪ್ರತಿಭಟನೆ ನಡೆಸಿ ಉಡುಪಿ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಿದ್ದಾರೆ.

“ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವೂ ಸಹ ಒಂದು, ಈ ದೇವಾಲಯವು ಸರಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು, ಇದಕ್ಕೆ ದಕ್ಷಿಣ ಕಾಶಿ ನಾಮಾಂಕಿತಗೊಂಡಿರುತ್ತದೆ. ಈ ಪುಣ್ಯಕ್ಷೇತ್ರಕ್ಕೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳಿಂದ ದಿನವೊಂದಕ್ಕೆ ಶ್ರೀ ಸ್ವಾಮಿಯ ದರ್ಶನ ಪಡೆಯಲು 50 ರಿಂದ 1 ಲಕ್ಷದವರೆಗೆ ಜನ ಬಂದು ಹೋಗುತ್ತಾರೆ.

ಈ ರೀತಿ ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಶ್ರೀ ಗಿರೀಶ ಮಟ್ಟೆನ್ನವರ, ಮಹೇಶ ಶೆಟ್ಟಿ ತಿಮರೋಡಿ, ಸಂತೋಷ್ ಶೆಟ್ಟಿ, ಜಯಂತ ಟಿ. ಮತ್ತು ಅವನ ಸಹಚರರು ಸೇರಿಕೊಂಡು ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಪೂಜ್ಯನೀಯ ಶ್ರೀ ಡಾ| ಡಿ. ವೀರೇಂದ್ರ ಹೆಗ್ಗಡೆ ಇವರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆಗಳಲ್ಲಿ ವಿಡಿಯೋಗಳ ತುಣುಕುಗಳನ್ನು ತಯಾರಿಸಿ ಅದನ್ನು ಸಮೂಹ ಮಾಧ್ಯಮಗಳಲ್ಲಿ ಹರಿಬಿಡುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ಧರ್ಮಸ್ಥಳ ದೇವಾಲಯವನ್ನೇ ಗುರಿಯಾಗಿಸಿಕೊಂಡು ನಿರಂತರವಾಗಿ ಸುಳ್ಳು ಅಪಪ್ರಚಾರಗಳನ್ನು ಮಾಡುತ್ತಿರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನಿರಂತರವಾಗಿ ಧಕ್ಕೆಯುಂಟಾಗುತ್ತಿದೆ. ಮತ್ತು ಮೇಲೆ ತಿಳಿಸಿದ ವ್ಯಕ್ತಿಗಳು ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಅಲ್ಲದೇ ಅವರ ಸುಳ್ಳು ಆರೋಪಗಳಿಂದ ಧರ್ಮಸ್ಥಳದ ಭಕ್ತರಾದ ನಮಗೆ ಸಮಾಜದಲ್ಲಿ ಕೀಳಾಗಿ ಬಿಂಬಿಸುತ್ತಿರುವುದು ಸಹಿಸಲಸಾಧ್ಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿರುವುದಲ್ಲದೆ ಸಮಾಜ ಭಾಂಧವರಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುತ್ತಿದ್ದಾರೆ. ಇದರಿಂದ ಮುಂದೆ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗ ಮಾಡುವ ಸಂಭವವಿರುತ್ತದೆ.

ಅನಾಮಿಕ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ಕರ್ನಾಟಕದ ಘನ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಅದರ ಮೂಲಕ ಈ ದೂರನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಭಕ್ತವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತಿದ್ದೇವೆ, ಸದ್ರಿ ನಡೆಯುತ್ತಿರುವ ತನಿಖೆಯು ಅರ್ಥಪೂರ್ಣವಾಗಿ ಕೊನೆಗೊಳ್ಳಬೇಕಾಗಿದೆ. ಅನಾಮಿಕ ದೂರುದಾರನನ್ನು ಬಳಸಿಕೊಂಡು ಸಂತೋಷ್ ಶೆಟ್ಟಿ, ಗಿರೀಶ ಮಟ್ಟೆನ್ನವರ, ಮಹೇಶ ಶೆಟ್ಟಿ ತಿಮರೋಡಿ, ಜಯಂತ ಟಿ. ಇವರ ಹಿನ್ನಲೆ, ಇವರಿಗಾಗುವ ಲಾಭಗಳು, ಇವರಿಗೆ ಸುಳ್ಳು ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದ್ದಾರೆ ಮತ್ತು ಸದ್ರಿಯವರ ಬ್ಯಾಂಕ್‌ ಖಾತೆಗಳನ್ನು ತನಿಖೆಗೊಳಪಡಿಸಬೇಕು. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹತ್ತಿರ ಅಂದರೆ ಮೊಬೈಲ್‌ನಲ್ಲಿ ಸಾಕ್ಷಾಧಾರಗಳು ಇವೆ ಅಂತಾ ಘಂಟಾಘೋಷವಾಗಿ ಸಾರುತ್ತಿರುವ ಜಯಂತ ಟಿ, ಸಂತೋಷ್ ಶೆಟ್ಟಿ, ಗಿರೀಶ ಮಟ್ಟೆನ್ನವರ, ಮಹೇಶ ಶೆಟ್ಟಿ ತಿಮರೋಡಿ ಇವರ ಮೊಬೈಲ್ ಗಳನ್ನು ಇವರ ಮನೆ ಹಾಗೂ ಕಛೇರಿಗಳನ್ನು ತನಿಖೆ ಮಾಡಬೇಕು ಹಾಗೂ ಸತ್ಯಾಂಶವನ್ನು ಬಯಲಿಗೆ ಎಳೆಯಲು ಈಗಿರುವ ತನಿಖಾ ತಂಡದಿಂದ(ಎಸ್ ಐ ಟಿ) ಅಥವಾ ಇನ್ನೊಂದು ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಬೇಕು.

ನಮ್ಮ ಪೂರ್ವಜರ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಮಂಜುನಾಥಸ್ವಾಮಿ ಹಾಗೂ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಇವರ ಬಗ್ಗೆ ಅಪಪ್ರಚಾರ ಮಾಡುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ರೀತಿಯ ಸುಳ್ಳು ಸುದ್ದಿಗಳು ಸಮೂಹ ಮಾಧ್ಯಮಗಳಲ್ಲಿ ಇನ್ನು ಮುಂದೆ ಪ್ರಸಾರವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮಾನ್ಯ ಶಾಸಕರುಗಳು , ಗಣ್ಯರು , ಜನಜಾಗೃತಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇಂಟೆಲ್‌ನ ಕೋರ್ 5 120 ಮತ್ತು 120F: ಹಳೆಯ ವಾಸ್ತುಶಿಲ್ಪ, ಹೊಸ ಲೇಬಲ್, ಹೆಚ್ಚಿನ ಬೆಲೆ

ಇಂಟೆಲ್ ತನ್ನ ಹೊಸ Core5 120U ಮತ್ತು 120F ಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳು ಇಂಟೆಲ್‌ನ ಹೊಸ 'ಸರಣಿ 1' ಹೆಸರಿನಲ್ಲಿ ಬಿಡುಗಡೆಯಾಗಿದ್ದರೂ, ಇದರ ವಾಸ್ತುಶಿಲ್ಪವು ಹಳೆಯ ರಾಪ್ಟರ್ ಲೇಕ್ ಮತ್ತು ಆಲ್ಡರ್ ಲೇಕ್ ವಿನ್ಯಾಸಗಳನ್ನು ಆಧರಿಸಿದೆ. ಇದು ತಂತ್ರಜ್ಞಾನ ತಜ್ಞರ ಹಾಗೂ ಗ್ರಾಹಕರ ಗಮನ ಸೆಳೆದಿದೆ.

ಪ್ರತಿದಿನ ಬೆಳಿಗ್ಗೆ ತುಪ್ಪ ಬೆರೆಸಿದ ಬಿಸಿ ನೀರು ಕುಡಿದರೆ ಇಷ್ಟೆಲ್ಲಾ ಲಾಭ: ಆರೋಗ್ಯ ತಜ್ಞರಿಂದ ಸಲಹೆ

ಬಿಸಿನೀರಿಗೆ ಅರ್ಧ ಚಮಚ ತುಪ್ಪ ಬೆರೆಸಿ ಕುಡಿಯುವುದರಿಂದ ಇನ್ನಷ್ಟು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸೇರಿದಂತೆ 6 ಮಂದಿ ಸಾವು

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.

ಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಯೂಟ್ಯೂಬ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.