about-us
ಪ್ರೀತಿಯ ಓದುಗ ಬಂಧುಗಳೇ,
ನಾವೆಲ್ಲರೂ 21ನೇ ಶತಮಾನದ ಆಧುನಿಕ ಡಿಜಿಟಲ್ ಯುಗದಲ್ಲಿದ್ದೇವೆ. ನಮ್ಮ ಹೊಟ್ಟೆಪಾಡಿಗೆ ದುಡಿಮೆ ಎಂಬುದು ನಮಗೆಲ್ಲರಿಗೂ ಅತೀ ಮುಖ್ಯವಾಗಿದೆ.ಇಂತಹ ಬಿಡುವಿಲ್ಲದ ಒತ್ತಡದ ದಿನಗಳಲ್ಲಿ ನಮ್ಮ ಸುತ್ತಮುತ್ತ ಊರ, ಪರವೂರ, ದೇಶ,ವಿದೇಶ ಹಾಗೂ ಎಲ್ಲಾ ರೀತಿಯ ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮದ ಮೂಲಕ ಅತೀ ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಮನಗಂಡು ಎಲ್ಲಾ ರೀತಿಯ ಸುದ್ದಿಗಳು ಹಾಗೂ ಧಾರ್ಮಿಕ ಆಚರಣೆಗಳು,ಮನೋರಂಜನಾ ಕಾರ್ಯಕ್ರಮಗಳು,ದೇವಸ್ಥಾನ ಹಾಗೂ ,ನಮ್ಮ ಸುತ್ತಮುತ್ತ ವಿರುವ ನಮಗೆ ತಿಳಿದೇ ಇಲ್ಲದ ಕೆಲವೊಂದು ಐತಿಹಾಸಿಕ ಸ್ಥಳಗಳ ಪರಿಚಯ ಇವೆಲ್ಲವನ್ನೂ ಕೂಡ ನಾವೆಲ್ಲರೂ ನಮ್ಮ ಮೊಬೈಲ್ ಫೋನ್ ನಲ್ಲಿಯೇ NP ನ್ಯೂಸ್ ಎಂಬ ಸುದ್ಧಿ ಮಾಧ್ಯಮದ ಮೂಲಕ ತಲುಪಿಸಬೇಕೆಂಬುದು ನಮ್ಮ ಹಂಬಲ.ಈ ಮಾಧ್ಯಮವು ಕೇವಲ ಸುದ್ದಿ ಮಾತ್ರಕ್ಕೆ ಸೀಮಿತವಲ್ಲದೇ ನಮ್ಮ ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಹಬ್ಬಗಳು ಮತ್ತು ವಿಶೇಷ ಆಚರಣೆಗಳು ಹಾಗೂ ಕರಾವಳಿ ಭಾಗದ ಎಲ್ಲಾ ರೀತಿಯ ಸೊಬಗನ್ನು ಎಲ್ಲಾ ಜನರಿಗೂ ತಲುಪಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ಎಲ್ಲಾ ಮುಖ್ಯ ಆಶಯದೊಂದಿಗೆ NP ಎಂಬ ಹೆಸರಿನಲ್ಲಿ ವೆಬ್ ನ್ಯೂಸ್,ಯೂಟ್ಯೂಬ್ ಚಾನೆಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆ ಸೇರಿದಂತೆ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳನ್ನು ಆರಂಭ ಮಾಡುತ್ತಿದ್ದೇವೆ.ನಮ್ಮೆಲ್ಲಾ ಕನಸುಗಳು ಸಾಕಾರಗೊಳ್ಳಬೇಕಾದರೆ ಓದುಗರಾದ ನಿಮ್ಮೆಲ್ಲರ ಸಹಕಾರ ಅತೀ ಮುಖ್ಯ. ನಿಮ್ಮದೇ ಆದ NP ನ್ಯೂಸ್ ಅನ್ನು ಉಳಿಸಿ, ಬೆಳೆಸಿ ನಮ್ಮನ್ನು ಸದಾ ಹರಸಿ ಎಂದು ಕೇಳಿಕೊಳ್ಳುತ್ತಾ ಈ ಕೂಸನ್ನು ನಿಮ್ಮ ಮಡಿಲಿಗೆ ಸಮರ್ಪಿಸುತ್ತಿದ್ದೇವೆ.
ವಾಸುದೇವ ಭಟ್, ನೆಕ್ಕರ ಪಲ್ಕೆ